*****ನುಬ್ರಾ ವ್ಯಾಲಿ*****
ಹಿಮಾಲಯದ ಒಡಲಲ್ಲೊಂದು ತಂಪು ಮರುಭೂಮಿ.
Hunder-Nubra valley Leh-Ladakh Cold desert.
ಮರುಭೂಮಿಯೆಂದರೆ ಸದಾ ಕುದಿಯುತ್ತಿರೋ ಸೂರ್ಯ,ಸುಡುವ ಬಿಸಿಲು,ಹನಿ ನೀರಿಗೂ ತಾತ್ವಾರವೆನಿಸೋ ಬರಡು ಭೂಮಿ ಎಂಬೆಲ್ಲಾ ನಮ್ಮೊಳಗಿನ ನಂಬಿಕೆಯನ್ನೇ ಹುಸಿಯಾಗಿಸಿ ಬೆರಗುಗೊಳಿಸೋ ವಿಸ್ಮಯಲೋಕವೇ ಹಿಮಾಲಯದ ತಪ್ಪಲಿನಲ್ಲಿರುವ ಕೊರೆವ ಛಳಿಯ ನಡುವಿನ ತಣ್ಣನೆಯ ಮರಳುಗಾಡು ನುಬ್ರಾ ವ್ಯಾಲಿ.
ಲೇಹ್ ಲಡಾಖ್ ಪ್ರಾಂತ್ಯದ ಉತ್ತರಕ್ಕೆ ಭಾರತ ಪಾಕಿಸ್ತಾನ ಹಾಗೂ ಚೀನಾ ದೇಶಗಳ ನಡುವೆ ಗಡಿರೇಖೆಯಂತಿರೋ,ಜಗತ್ತಿನಲ್ಲಿಯೇ ಎರಡನೇ ಎತ್ತರವಾದ,ಧ್ರುವಪ್ರದೇಶಗಳನ್ನು ಹೊರತು ಪಡಿಸಿದರೆ ಅತ್ಯಂತ ಹೆಚ್ಚು ಹಿಮದಿಂದಾವೃತವಾಗಿರೋ ಪ್ರದೇಶವೆಂಬ ಖ್ಯಾತಿಯ ಕಾರಾಕೋರಂ ಪರ್ವತಶ್ರೇಣಿಗಳಲ್ಲಿನ ಸಿಯಾಚಿನ್ ಗ್ಲೇಶಿಯರ್ ನಿಂದ ಕೇವಲ ಮೂವತ್ತು ಕಿಮೀ ಅಂತರದಲ್ಲಿದ್ದೂ ಈ ವ್ಯಾಲಿ ಸಂಪೂರ್ಣ ಮರಳಿನ ದಿಬ್ಬಗಳಿಂದಾವೃತವಾದ ಮರುಭೂಮಿಯಂತಾಗಿರೋದು ಪ್ರಕೃತಿಯ ನಿಗೂಢತೆಗೊಂದು ನಿದರ್ಶನ.
ಲೇಹ್ ನಿಂದ ಖರ್ದೂಂಗ್-ಲಾ ಪಾಸ್ ಮುಖಾಂತರ ಡಿಸ್ಕಿತ್ ಮಾರ್ಗವಾಗಿ 150 ಕಿಮೀ ಸಾಗಿದಲ್ಲಿ ಕಾಣಸಿಗೋ ನುಬ್ರಾ ವ್ಯಾಲಿಯ ಪ್ರಮುಖ ಆಕರ್ಷಣೆಯೇ ಹಿಮದ ತದ್ರೂಪಿನಂತೆ ಕಂಗೊಳಿಸೋ ಹುಂಡರ್ ಮರಳು ದಿಬ್ಬಗಳು ಹಾಗೂ ಇಡೀ ಭಾರತದಲ್ಲಿ ಇಲ್ಲಿ ಮಾತ್ರ ಕಾಣಸಿಗುವ ಎರಡು ಡುಬ್ಬಗಳ ಬ್ಯಾಕ್ಟ್ರಿಯನ್ ಒಂಟೆಗಳು.ಇದಲ್ಲದೆ ಖಾರ್ದೂಂಗ್-ಲಾ ಪಾಸ್ ಸೇರಿದಂತೆ ಸುಮುರ್,ಡಿಸ್ಕಿತ್,ಪನಾಮಿಕ್,ಕೈಗರ್ ಹಳ್ಳಿಗಳು ಕೂಡಾ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು,ಇವೂ ಕೂಡಾ ಪ್ರೇಕ್ಷಣೀಯ ಸ್ಥಳಗಳಾಗಿವೆ.
ಈ ನುಬ್ರಾ ವ್ಯಾಲಿಯ ಮತ್ತೊಂದು ವಿಶೇಷವೆಂದರೆ,
ಅತೀ ಪ್ರಾಚೀನ ಅಂತರ ರಾಷ್ಟ್ರೀಯ ವಾಣಿಜ್ಯ ಮಾರ್ಗವಾದ “ಸಿಲ್ಕ್ ರೂಟ್” ಎಂದು ಕರೆಯಲ್ಪಡುವ ರಸ್ತೆ ಮಾರ್ಗವಿದು. ಅಂದ್ರೆ ಓಲ್ಡೆಸ್ಟ್ ಇಂಟರ್ನ್ಯಾಶನಲ್ ಹೈವೇ ಅನ್ನಬಹುದು.ಹಿಂದೆ ಸಾಂಬಾರ ಪದಾರ್ಥಗಳನ್ನೂ ಸೇರಿದಂತೆ ಇನ್ನಿತರ ವಸ್ತುಗಳಿಗಾಗಿ ಐರೋಪ್ಯ ದೇಶಗಳಿಂದ ವ್ಯಾಪಾರಿಗಳು ಭಾರತವನ್ನು ತಲುಪಲು ಬಳಸುತ್ತಿದ್ದದ್ದು ಇದೇ ರಸ್ತೆ ಮಾರ್ಗವನ್ನು.
ಭಾರತದಿಂದ ಚೀನಾ ದೇಶಕ್ಕೆ ಅಥವಾ ಅಲ್ಲಿಂದ ಇಲ್ಲಿಗೆ ಹಿಂದೆಲ್ಲಾ ಇದೇ ಮಾರ್ಗವಾಗಿ ನಡೆದುಕೊಂಡೇ ಹೋಗಲಾಗುತ್ತಿತ್ತು.ಗಡಿ ವಿವಾದ ಉಲ್ಬಣಗೊಂಡ ನಂತರದಲ್ಲಿ ಮುಚ್ಚಲಾಗಿದೆಯಷ್ಟೇ....
ಮರಳಿನ ದಿಬ್ಬಗಳ ಮೇಲಿನ ಜಾರುಬಂಡಿಯಾಟ,ಎರಡು ಡುಬ್ಬದ ಒಂಟೆಯ ಮೇಲಿನ ಡೆಸರ್ಟ್ ಸಫಾರಿ,ಮರುಭೂಮಿಯ ನಡುವಲ್ಲಿರೋ ಓಯಸಿಸ್ ನಂತೆ ಕಂಡುಬರೋ ಹಸಿರು ಪ್ರದೇಶದ ನಡುವೆ ತೊರೆಗಳಂತೆ ಹರಿಯೋ ಶಿಯೋಕ್ ಹಾಗೂ ಸಿಯಾಚಿನ್ ನದಿಗಳ ಸಂಗಮ,ಅವುಗಳಿಗೆ ಅಡ್ಡಲಾಗಿ ಹಾಕಲಾಗಿರೋ ಪುಟ್ಟ ಮರದ ಸೇತುವೆಗಳು,ಹಿಮದಿಂದಾವೃತವಾದ ಪರ್ವತದಂಚುಗಳು ಬಂಗಾರದ ಲೇಪನವಾದಂತೆ ಕೆಂಬಣ್ಣಕ್ಕೆ ತಿರುಗೋ ಸೂರ್ಯೋದಯ ಸೂರ್ಯಾಸ್ತಗಳು ಹೊಸದೊಂದು ಜಗತ್ತಿಗೇ ಕೊಂಡೊಯ್ದುಬಿಡುತ್ತವೆ.
ಡಿಸ್ಕಿತ್ (Diskit) .
ನುಬ್ರಾವ್ಯಾಲಿಯ ಕೇಂದ್ರಸ್ಥಾನ ಹಾಗೂ ಸಿಯಾಚಿನ್ ಸೆಕ್ಟರಿನ ಮಿಲಿಟರಿಗಳ ಬೇಸ್ ಕ್ಯಾಂಪ್ ಕೂಡಾ ಆಗಿರೋ ಈ ಪುಟ್ಟ ಗ್ರಾಮದ ಪ್ರಮುಖ ಆಕರ್ಷಣೆ ಲಾಚುಂಗ್ ದೇವಸ್ಥಾನ ಹಾಗೂ 14 ನೇ ಶತಮಾನದ ಡಿಸ್ಕಿತ್ ಮಾನೆಸ್ಟರಿಯಲ್ಲಿ ಸ್ಥಾಪಿಸಲಾಗಿರುವ 106 ಅಡಿಗಳ ಎತ್ತರದ ಮೈತ್ರೇಯ ಬುದ್ಧನ ಮೂರ್ತಿ.ಬಂಗಾರದ ಲೇಪನವಾಗಿರೋ ಈ ಮೂರ್ತಿಯನ್ನು ಪಾಕಿಸ್ತಾನಕ್ಕೆ ಮುಖ ಮಾಡಿದಂತೆ ಕೂರಿಸಲಾಗಿರೋದು ವಿಶೇಷ.ಇಲ್ಲಿ ಪ್ರತೀವರ್ಷ ಫೆಬ್ರವರಿಯಲ್ಲಿ ಡೋಮೋಚೇ(Festival of the Scape goat) ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಖಾರ್ದೂಂಗ್-ಲಾ ಪಾಸ್. Khardung-La Pass
ಸಮುದ್ರ ಮಟ್ಟದಿಂದ 18379 ಅಡಿಗಳ ಎತ್ತರದಲ್ಲಿದ್ದು,ಜಗತ್ತಿನಲ್ಲಿಯೇ ಅತ್ಯಂತ ಎತ್ತರದಲ್ಲಿ ವಾಹನ ಚಲಾಯಿಸಬಹುದಾದ ರಸ್ತೆ ಎಂಬ ಖ್ಯಾತಿಯನ್ನೂ ಹೊಂದಿದೆ.ಅತ್ಯಂತ ದುರ್ಗಮ ಹಾಗೂ ತೀರಾ ವಿರಳ ಆಮ್ಲಜನಕದ ಲಭ್ಯತೆಯಿರೋ ಈ ಜಾಗದಲ್ಲಿ ವರ್ಷವಿಡೀ ಹಿಮ ಕಾಣಸಿಗುತ್ತದೆ.ಅತೀ ಪ್ರಾಚೀನ ವಾಣಿಜ್ಯ ಮಾರ್ಗವಾದ ಸಿಲ್ಕ್ ರೂಟ್ ನ ಪ್ರಮುಖ ಅಂಗವಿದಾಗಿದ್ದು,ಸಿಯಾಚಿನ್ ಸೆಕ್ಟಾರಿಗೆ ಸಂಪರ್ಕ ಕಲ್ಪಿಸೋ ಏಕೈಕ ರಸ್ತೆ ಮಾರ್ಗ ಇದಾಗಿದೆ.
ಪನಾಮಿಕ್.
ಟೈಗರ್ ವಿಲೇಜ್ ಎಂದೇ ಖ್ಯಾತಿಯ ಈ ಪುಟ್ಟ ಹಳ್ಳಿಯಲ್ಲಿನ ಮೈ ಕೊರೆವ ಛಳಿಯ ನಡುವಲ್ಲೂ ಮುಗಿಲೆತ್ತರಕ್ಕೆ ಚಿಮ್ಮುವ ಬಿಸಿನೀರ ಬುಗ್ಗೆಗಳು ಹಾಗೂ ಸ್ಥಳೀಯರು ಅತ್ಯಂತ ಪವಿತ್ರವೆಂದು ಪೂಜಿಸುವ ಯಾರಬ್ ಸರೋವರ ಪ್ರಮುಖ ಆಕರ್ಷಣೆ.ಹಿಮನದಿಯ ತಟದಲ್ಲಿ ಎಲ್ಲೆಂದರಲ್ಲಿ ನೆಲದಿಂದೆದ್ದು ಬರುವ ಬುಗ್ಗೆಗಳ ನಡುವಲ್ಲಿ ಕುಳಿತು ರಿಲ್ಯಾಕ್ಸ್ ಆಗಬಹುದು ನದಿಯ ನೀರಿನ ಹರಿವು ಹೆಚ್ಚಿರಬೇಕಷ್ಟೇ.ಇಲ್ಲದಿದ್ದಲ್ಲಿ ವಿಪರೀತ ಬಿಸಿ.
ಇತರ ಪ್ರೇಕ್ಷಣೀಯ ಸ್ಥಳಗಳು.
ಸುಮುರ್ ನಲ್ಲಿರೋ ಸಾನ್ಸಲಿಂಗ್ ಮಾನೆಸ್ಟರಿ,2010 ರ ವರೆಗೂ ಹೊರಗಿನವರಿಗೆ ಪ್ರವೇಶಕ್ಕೆ ನಿರ್ಬಂಧ ವಿದ್ದ ಟುರ್ಟುಕ್ ವಿಲೇಜ್,ಚಂಬಾ ಮಾನೆಸ್ಟರಿ,ಸಿಯಾಚಿನ್ ಬೇಸ್ ಕ್ಯಾಂಪ್.
ವಸತಿ ವ್ಯವಸ್ಥೆ :-
ತಂಗಲು ಡಿಸ್ಕಿತ್ ಹಾಗೂ ಹುಂಡರ್ ನಲ್ಲಿ ಸಾಕಷ್ಟು ಸಂಖ್ಯೆಯ ಹೋಮ್ ಸ್ಟೇ ಹಾಗೂ ಹೋಟೆಲ್ ಗಳು ಲಭ್ಯವಿದೆ.
ಕೇವಲ ಒಂದು ಪೆಟ್ರೋಲ್ ಬಂಕ್ ಮಾತ್ರ ಡಿಸ್ಕಿತ್ ನಲ್ಲಿದ್ದು ನಿಮ್ಮದೇ ವಾಹನದಲ್ಲಿ ಹೊರಟಲ್ಲಿ ಲೇಹ್ ನಲ್ಲಿಯೇ ಇಂಧನ ತುಂಬಿಸಿಕೊಳ್ಳೋದು ಉತ್ತಮ.
ಲೇಹ್ ಹೊರತು ಪಡಿಸಿ ಮತ್ತೆಲ್ಲೂ ATM ಗಳು ಲಭ್ಯವಿಲ್ಲದ ಕಾರಣ ಸಾಕಷ್ಟು ಹಣದೊಂದಿಗೇ ಹೊರಡೋದು ಸೂಕ್ತ.
ಸಮೀಪದ ವಿಮಾನನಿಲ್ದಾಣ :-ಲೇಹ್.
ಯಾವುದೇ ರೈಲ್ವೆ ಸಂಪರ್ಕ ಇಲ್ಲದ ಕಾರಣ ವಿಮಾನ ಮಾರ್ಗ ಹೊರತು ಪಡಿಸಿ ಕೇವಲ ರಸ್ತೆ ಮಾರ್ಗವಾಗಿ ಹೊರ ರಾಜ್ಯಗಳಿಂದ ಲೇಹ್ ತಲುಪಬಹುದಾಗಿದೆ.
ವೀಕ್ಷಣೆಗೆ ಸೂಕ್ತ ಕಾಲ.
ಏಪ್ರಿಲ್ ನಿಂದ ನವಂಬರ್ ವರೆಗಷ್ಟೇ ಹೊರ ರಾಜ್ಯಗಳಿಂದ ಲೇಹ್ ಗೆ ರಸ್ತೆಮಾರ್ಗವಾಗಿ ಸಂಪರ್ಕ ಸಾಧ್ಯವಿರೋ ಕಾರಣ ಆ ಸಮಯದಲ್ಲಷ್ಟೇ ಸಂದರ್ಶಿಸೋದು ಸೂಕ್ತ.
Nubra Valley
Hunder sand Dunes
Diskith Leh-Ladakh
Khardung-La pass Panamik Turtuk Sumur Zimkhang Gompa Yarab-Tso Lake
Samstaling Monastery Khalsar Kyagar village Siachin
Long Drive Himalayan Diaries

No comments:
Post a Comment