*****ಚಿರ್ರಾಪುಂಜಿ*****
ಪೂರ್ವೋತ್ತರ ರಾಜ್ಯದಲ್ಲೊಂದು ಮುದ್ದು ಮ(ಳೆ)ಲೆನಾಡು.
ಹೆಸರು ಕೇಳಿದಾಕ್ಷಣ ತಕ್ಷಣ ಕಣ್ಣೆದುರು ಬರೋದೇ ಧೋ ಎಂದು ಸುರಿಯುತ್ತಿರೋ ಜಡಿಮಳೆಯಲ್ಲಿ ತೋಯ್ದು ತೊಪ್ಪೆಯಾಗಿರೋ ಊರೊಂದರ ಚಿತ್ರಣ.ಮೇಘಾಲಯದ ರಾಜಧಾನಿ ಶಿಲ್ಲೋಂಗ್ ನಿಂದ ಕೇವಲ 54 ಕಿಮೀ ದೂರದಲ್ಲಿರೋ ಈಸ್ಟ್ ಖಾಸೀ ಹಿಲ್ಸ್ ಜಿಲ್ಲೆಯ ಈ ಪಟ್ಟಣದ ಮೂಲ ಹೆಸರಾಗಿದ್ದ “ಸೊಹರಾ” ಬ್ರಿಟಿಷರಿಂದ ಚುರ್ರಾ ಎಂಬುದಾಗಿ ಅಪಭ್ರಂಶ ಗೊಂಡು ಈಗ ಚಿರ್ರಾಪುಂಜಿಯಾಗಿದೆ.
ವರ್ಷವಿಡೀ ಮಳೆಯಿಂದ ಕೂಡಿದ ಹಿಮದಿಂದಾವೃತ ತಂಪು ವಾತಾವರಣ ಇಲ್ಲಿನ ಮುಖ್ಯ ಆಕರ್ಷಣೆಯೆನ್ನಿಸಿದರೂ ಅದನ್ನೂ ಮೀರಿಸುವಂತೆ ಕಣ್ಮನ ಸೆಳೆಯೋದು ಇಲ್ಲಿನ ನಯನಮನೋಹರ ಜಲಪಾತಗಳು,ಅನ್ಯಗ್ರಹ ಜೀವಗಳ ಜಗತ್ತೆಂಬಂತೆ ಭಾಸವಾಗಿಸೋ ಗುಹೆಗಳು,ಪರ್ವತ ಶ್ರೇಣಿಗಳು, ಕಣಿವೆ ಪ್ರದೇಶಗಳು, ಅತೀ ಶುಭ್ರ ನದಿಗಳು ಹಾಗೂ ಇವುಗಳಿಗೆಲ್ಲಾ ಕಳಸವಿಟ್ಟಂತಿರೋ ಮರದ ಬೇರುಗಳನ್ನೇ ಹೆಣೆದು ನಿರ್ಮಿಸಲಾದ ಜೀವಂತ ಸೇತುವೆಗಳು ಸೇರಿದಂತೆ ಇನ್ನಿತರ ಸಂಗತಿಗಳು.
ಪ್ರಮುಖ ಆಕರ್ಷಣೆಗಳು.
ನೋರಿಯಾತ್ ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್.
ಚಿರ್ರಾಪುಂಜಿಯಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರದಲ್ಲಿರೋ ಪುಟ್ಟ ಹಳ್ಳಿ ಟೆರ್ನಾ.ಇಲ್ಲಿಂದ ಬಹುಪಾಲು ಮಟ್ಟಿಲುಗಳಂದಲೇ ಕೂಡಿದ ಕಾಡು ಹಾದಿಯಲ್ಲಿ ಮೂರು ಕಿಮೀ ದೂರ ಪರ್ವತಸಾಲುಗಳನ್ನು ಇಳಿದಲ್ಲಿ ಸಿಗುವ ನೋರಿಯಾತ್ ಎಂಬ ಹಳ್ಳಿಯಲ್ಲಿ ರಾನಿಯಾತ್ ಎಂಬ ನದಿಗಡ್ಡಲಾಗಿ ಇಕ್ಕೆಲದಲ್ಲಿರುವ ಮರದ ಬೇರುಗಳನ್ನೇ ಬಳಸಿಕೊಂಡು ನಿರ್ಮಿಸಲಾಗಿರುವ ಎರಡು ಅಂತಸ್ತುಗಳ ಸೇತುವೆಯಿದು.
ನೋರಿಯಾತ್ ನಲ್ಲಿ ಒಟ್ಟು ಮೂರು ರೂಟ್ ಬ್ರಿಡ್ಜುಗಳಿದ್ದು ಟೆರ್ನಾದಿಂದ ಬರುವ ಹಾದಿಯಲ್ಲಿಯೇ ಕಾಣಸಿಗುವುದಷ್ಟೇ ಅಲ್ಲದೆ ಕಬ್ಬಿಣದ ರೋಪುಗಳು ಹಾಗೂ ಬಿದಿರುಗಳನ್ನು ಬಳಸಿ ನಿರ್ಮಿಸಲಾಗಿರುವ ತೂಗು ಸೇತುವೆಯನ್ನೂ ದಾಟುವ ಅನುಭವ ನಮ್ಮದಾಗಿರುತ್ತದೆ.
ಕಾಮನಬಿಲ್ಲಿನ ಜಲಪಾತವೆಂಬ ಖ್ಯಾತಿಯ ಕಾಲಿಖಾಯ್ ವಾಟರ್ ಫಾಲ್ಸ್ ನ್ನು ಕಣ್ತುಂಬಿಕೊಳ್ಳಬಹುದು.
ಡಾಕಿ.
ಚಿರ್ರಾಪುಂಜಿಯಿಂದ ಎಂಬತ್ತೈದು ಕಿಮೀ ದೂರದಲ್ಲಿರೋ ಭಾರತ ಹಾಗೂ ಬಾಂಗ್ಲಾದೇಶದ ಗಡಿಭಾಗದಲ್ಲಿರುವ ಕೊನೆಯ ಹಳ್ಳಿಯಿದು.
ಗಡಿರೇಖೆಯೆಳೆದಂತೆ ಎರಡು ದೇಶಗಳನ್ನು ಬೇರ್ಪಡಿಸುತ್ತಾ ನಡುವೆ ಹರಿಯುವ ಹಸಿರು ಬಣ್ಣದಲ್ಲಿ ಕಂಗೊಳಿಸೋ ಉಂಗೋಟ್ ನದಿಯೇ ಇಲ್ಲಿನ ಪ್ರಮುಖ ಆಕರ್ಷಣೆ.ಈ ನದಿ ಅದೆಷ್ಟು ಶುಭ್ರ ಹಾಗೂ ಸ್ಪಟಿಕ ಸ್ಪಷ್ಟವಾಗಿದೆ ಎಂದರೆ ಹತ್ತಾರು ಅಡಿಗಳ ಆಳದ ಕಲ್ಲುಗಳನ್ನೂ ಮೇಲ್ಮೈಯಿಂದ ಸ್ಪಷ್ಟವಾಗಿ ಕಾಣಬಹುದಾಗಿದ್ದು,ನದಿಯಲ್ಲಿ ಸಾಗುತ್ತಿರೋ ದೋಣಿಗಳನ್ನು ಕಂಡಾಗ ಒಂದು ಕ್ಷಣ ಗಾಳಿಯಲ್ಲಿ ತೇಲುತ್ತಿವೆಯೇನೋ ದೋಣಿಗಳೆಲ್ಲಾ ಎಂಬ ಭ್ರಮೆ ಮೂಡಿಸಿ ಬಿಡುತ್ತದೆ ನೋಡುಗನಿಗೆ.ನದಿಯಲ್ಲಿ ದೋಣಿ ವಿಹಾರ ಮಾಡಲು ಅನುಕೂಲವಿದ್ದು ಅದರಲ್ಲಿಯೇ ಸಮೀಪದಲ್ಲಿರೋ ದ್ವೀಪವನ್ನೂ ಸುತ್ತಿ ಬರಬಹುದಾಗಿದೆ.ನದಿಗೆ ಅಡ್ಡಲಾಗಿ ಕಬ್ಬಿಣದ ಸೇತುವೆಯೊಂದನ್ನು ನಿರ್ಮಿಸಲಾಗಿದ್ದು ಅದರ ಇನ್ನೊಂದು ಬದಿ ಬಾಂಗ್ಲಾದೇಶಕ್ಕೆ ಸೇರುತ್ತದೆ.
ಮಯಲಿಂಗ್ ಲಾಂಗ್ ವಿಲೇಜ್.
ಏಷ್ಯಾ ಖಂಡದಲ್ಲಿಯೇ ಅತ್ಯಂತ ಸ್ವಚ್ಛ ಹಳ್ಳಿ( ಕ್ಲೀನೆಸ್ಟ್ ವಿಲೇಜ್) ಎಂಬ ಬಿರುದನ್ನು ಪಡೆದಿರುವ ಮಯಲಿಂಗ್ ಲಾಂಗ್ ತನ್ನ ಸ್ವಚ್ಛ ಪರಿಸರದಿಂದಾಗಿಯೇ ಪ್ರಖ್ಯಾತವಾಗಿದೆ.ಬಿದಿರುಗಳನ್ನೇ ಬಳಸಿ ಮರದ ಮೇಲೆ ನಿರ್ಮಿಸಲಾಗಿರೋ ಮನೆಗಳು,ಸಂಪೂರ್ಣ ಸೋಲಾರ್ ವಿದ್ಯುತ್ ವ್ಯವಸ್ಥೆ,ಸಂಪರ್ಕಕ್ಕೆ ಬಿದಿರಿನಿಂದಲೇ ನಿರ್ಮಿಸಿರೋ ಪುಟ್ಟ ತೂಗು ಕಾಲು ಹಾದಿಗಳು,ಬಿದಿರಿನಿಂದಲೇ ಯಾರಿಸಲಾದ ಕಲಾಕೃತಿಗಳಂತೆ ಭಾಸವಾಗೋ ಕಸದ ತೊಟ್ಟಿಗಳು.ಕಸಕಡ್ಡಿಗಳ,ದುರ್ವಾಸನೆಯ ಗಂಧಗಾಳಿಯೂ ಸುಳಿಯದಂತಹ ವಾತಾವರಣ.ಇಲ್ಲಿ ಎಲ್ಲವೂ ಶುದ್ಧ ಹಾಗೂ ಶಿಸ್ತು ಬದ್ಧ. ನಿಮಗಿಷ್ಟ ಬಂದಂತೆ ಸುತ್ತಬಹುದು ಪ್ರಕೃತಿಯನ್ನು ಆಸ್ವಾದಿಸಬಹುದು,ನಿರ್ಧಿಷ್ಟ ಜಾಗಗಳನ್ನು ಹೊರತು ಪಡಿಸಿ ಬೇರೆಲ್ಲೂ ಸಣ್ಣದೊಂದು ಕಡ್ಡಿಯನ್ನೆಸೆದರೂ ದಂಡ ಶತಸಿದ್ಧ.ಇಲ್ಲಿಯೂ ಒಂದು ಮರದ ಜೀವಂತ ಬೇರುಗಳಿಂದ ನಿರ್ಮಿಸಿದ ರೂಟ್ ಬ್ರಿಡ್ಜ್,ಜಲಪಾತಗಳನ್ನು ಕಾಣಬಹುದಾಗಿದೆ.
ಮೋಸಿನ್ ರಾಮ್.
ಜಗತ್ತಿನಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಜಾಗವೆಂಬ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರದೇಶವಿದು.ಈ ಹಳ್ಳಿಯಲ್ಲಿರೋ ಗುಹೆಗಳನ್ನಂತೂ ನೋಡದೆ ಹಿಂದಿರುಗಲು ಸಾಧ್ಯವೇ ಇಲ್ಲ.ಕಿಲೋಮೀಟರುಗಟ್ಟಲೇ ಚಾಚಿಕೊಂಡಿರೋ ಈ ಗುಹೆಗಳ ಒಳಭಾಗ ಹೊಸ ಜಗತ್ತನ್ನೇ ಅನಾವರಣಗೊಳಿಸಿಬಿಡುತ್ತವೆ.ಮಾಸ್ ಮೈ ಹಾಗೂ ಕ್ರಿಮ್ ಮುಮ್ಲು ಎಂಬ ಗುಹೆಗಳ ಒಳರಚನೆಯಂತೂ ಏಲಿಯನ್ ಗಳ ಜಗತ್ತಿನಲ್ಲಿದ್ದೇವೇನೋ ಎಂಬ ಭಾವನೆ ಮೂಡಿಸುತ್ತವೆ ನೋಡುಗನಲ್ಲಿ.
ನೋಕಾಲಿಕೈ ಜಲಪಾತ.
ಜಗತ್ತಿನ ಅತ್ಯಂತ ಎತ್ತರದ ಜಲಪಾತಗಳಲ್ಲೊಂದು ಎಂಬ ಖ್ಯಾತಿಯ ನೊಕಾಲಿಕೈ ಜಲಪಾತವಿರೋದು ಚಿರಾಪುಂಜಿಯಿಂದ ಕೇವಲ ಎಂಟು ಕಿಮೀ ಅಂತರದಲ್ಲಿ.ಜಲಪಾತದ ವಿಶೇವೆಂದರೆ ಇದರ ತಳಭಾಗ ಚಳಿಗಾಲದಲ್ಲಿ ನೀಲಿ ಬಣ್ಣದಿಂದ ಆಕರ್ಷಿಸಿದರೆ ಬೇಸಿಗೆಯಲ್ಲಿ ಸಂಪೂರ್ಣ ಹಸಿರು ಬಣ್ಣದಿಂದ ಕಂಗೊಳಿಸುತ್ತಿರುತ್ತದೆ.
ಇನ್ನಿತರ ಪ್ರೇಕ್ಷಣೀಯ ಸ್ಥಳಗಳು.
ಖಾಸಿ ನಾಗರೀಕತೆಯ ಉಗಮದ ಸಂಕೇತವಾಗಿ ನಿಲ್ಲಿಸಲಾಗಿರೋ ಖಾಸೀ ಏಕಶಿಲೆಗಳು.
ನಾನಿಥಾಂಗ್ ಅಥವಾ ಸೆವೆನ್ ಸಿಸ್ಟರ್ಸ್ ಜಲಪಾತ.
ಕೈನಮ್ ಜಲಪಾತ.ದೈಂಥನ್ ಜಲಪಾತ.ವಕಾಬಾ ಜಲಪಾತ.
ತಂಗಲು ವ್ಯವಸ್ಥೆ?
ಚಿರ್ರಾಪುಂಜಿ,ಮಯಲಿಂಗ್ ಲಾಂಗ್,ಡಾಕೀ ಹಾಗೂ ಮೋಸಿನ್ ರಾಮ್ ನಲ್ಲಿ ಹೋಟೆಲ್ ಹಾಗೂ ಹೋಮ್ ಸ್ಟೇ ಗಳು,ಬಿದಿರಿನ ಗುಡಿಸಲುಗಳು ಲಭ್ಯವಿದ್ದು,
ಮಯಲಿಂಗ್ ಲಾಂಗ್ ನಲ್ಲಿ ಟ್ರೀ ಹೌಸುಗಳೂ ಲಭ್ಯವಿದೆ.
ಹೇಗೆ ತಲುಪೋದು?
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ವರೆಗೂ ವಿಮಾನ ಸಂಪರ್ಕ ಸಾಧ್ಯವಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.
ರೈಲು ಮಾರ್ಗವಾಗಿ ಗುವಹಾಟಿಯ ವರೆಗೂ ತಲುಪಿ ಅಲ್ಲಿಂದ ರಸ್ತೆ ಮಾರ್ಗವಾಗಿ ಚಿರ್ರಾಪುಂಜಿ ತಲುಪಬಹುದು.
ಪ್ರಯಾಣಕ್ಕೆ ಸೂಕ್ತ ಕಾಲ?
ಸೆಪ್ಟೆಂಬರ್ ನಿಂದ ಮೇ ತಿಂಗಳಿನ ನಡುವಲ್ಲಿ ಕಡಿಮೆ ಮಳೆಯಿರುವ ಕಾರಣ ಪ್ರವಾಸಕ್ಕೆ ಪ್ರಶಸ್ತಕಾಲ.

No comments:
Post a Comment