*****ವರಂಗ-ಕೆರೆ ಬಸದಿ*****
ಕೆಂದಾವರೆಗಳಿಂದಾವೃತವಾದ ಕೊಳದ ನಡುವಲ್ಲೊಂದು ಕಲ್ಲಿನ ಕಮಲವರಳಿ ನಿಂತಂತೆ ಕಾಣುವ,ರಾಜ್ಯದಿಂದಲ್ಲದೆ ಹೊರ ರಾಜ್ಯಗಳಿಂದಲೂ ಜನರನ್ನು ಇನ್ನಿಲ್ಲದಂತೆ ತನ್ನತ್ತ ಸೆಳೆಯುತ್ತಿರೋ ಪುಟ್ಟ ಗುಡಿಯೇ ವರಂಗ ಬಸದಿಯೆಂದು,ಇತ್ತೀಚೆಗೆ ತೆತೆಕಂಡ "ಮುಗುಳುನಗೆ" ಚಲನಚಿತ್ರದ ನಂತರದಲ್ಲಿ ಮುಗುಳುನಗೆ ಮೂವೀ ಸ್ಪಾಟು ಎಂದೆಲ್ಲಾ ಪ್ರಖ್ಯಾತವಾಗಿರುವ ಕೆರೆ ಬಸದಿ.
ವರಂಗದಲ್ಲಿ ಕೆರೆ ಬಸದಿ,ನೇಮಿನಾಥ ಬಸದಿ ಹಾಗೂ ಚಂದ್ರನಾಥ ಬಸದಿ ಎಂಬ ಮೂರು ಬಸದಿಗಳಿದ್ದು,ಮೂರೂ ಬಸದಿಗಳು ತಮ್ಮದೇ ಆದ ವಿಭಿನ್ನತೆ ಹಾಗೂ ವಿಶೇಷತೆಗಳನ್ನು ಹೊಂದಿರುವುದು ಗಮನಿಸಬೇಕಾದ ಸಂಗತಿ.ಸುಮಾರು 1200 ವರ್ಷಗಳ ಹಿಂದೆ ವರಂಗರಾಯನೆಂಬ ಜೈನದೊರೆ ನಿರ್ಮಿಸಿದನೆನ್ನಲಾದ ಈ ಬಸದಿಗಳಿರೋದು ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ 24ಕಿಮೀ ಸಾಗಿದಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯೊಂದರಲ್ಲಿ.
ಕೆರೆ ಬಸದಿ.
ಸುಮಾರು ಹದಿನೈದು ಎಕರೆ ವಿಸ್ತೀರ್ಣದಲ್ಲಿ ಹರಟಿಕೊಂಡಿರೋ ವಿಶಾಲ ಕೆರೆಯ ನಡುವಲ್ಲಿ ನಕ್ಷತ್ರಾಕಾರದಂತೆ ಹೊಯ್ಸಳ ಹಾಗೂ ಚಾಳುಕ್ಯ ಶೈಲಿಯ ಸಮ್ಮಿಶ್ರಣದಲ್ಲಿ ಗುಡಿಯ ನಿರ್ಮಾಣ ಮಾಡಲಾಗಿದ್ದು ನಾಲ್ಕೂ ಬದಿಯಿಂದ ಪ್ರವೇಶಧ್ವಾರ ನಿರ್ಮಿಸಲಾಗಿದೆ.ಮಂಟಪದ ಒಳಭಾಗದಲ್ಲಿ ಮೊದಲ ಹಂತದಲ್ಲಿ ಪ್ರದಕ್ಷಿಣೆ ಮಂಟಪವೊಂದನ್ನು ನಿರ್ಮಿಸಲಾಗಿದ್ದು ನಡುವಲ್ಲಿರೋ ಗರ್ಭಗುಡಿಯಲ್ಲಿ ನಾಲ್ಕು ಬದಿಗೆ ಧ್ವಾರಗಳತ್ತ ಮುಖ ಮಾಡಿದಂತೆ ಪಾರ್ಶ್ವನಾಥ, ಶಾಂತಿನಾಥ,ಅನಂತನಾಥ,ನೇಮಿನಾಥ ರ ವಿಗ್ರಹಗಳಿವೆ.ಪಾರ್ಶ್ವನಾಥನೇ ಇಲ್ಲಿನ ಆರಾಧ್ಯ ದೈವವಾಗಿದ್ದು ಆತನ ಎದುರಲ್ಲಿ ಪದ್ಮಾವತಿ ಹಾಗೂ ಯಕ್ಷಿಯರ ವಿಗ್ರಹಗಳಿವೆ.
ದೋಣಿಯ ಸಹಾಯವಿಲ್ಲದೆ ಈ ಬಸದಿಯ ದರ್ಶನ ಅಸಾಧ್ಯ ಎಂಬುದು ಒಂದು ವಿಶೇಷವಾದರೆ,ಇಲ್ಲಿನ ಅರ್ಚಕನೇ ಈ ದೋಣಿ ನಡೆಸೋ ಅಂಬಿಗ ಎಂಬುದು ಮತ್ತೊಂದು ವಿಶೇಷ.ಭಕ್ತರನ್ನು ತಾನೇ ದೋಣಿ ನಡೆಸಿ ಕರೆತಂದು ಪೂಜೆ ಸಲ್ಲಿಸಿ ಮರಳಿ ಕೊಂಡೊಯ್ದು ದಡ ಸೇರಿಸುವುದು ಅರ್ಚಕರ ನಿತ್ಯದ ಕಾಯಕವಾಗಿದ್ದು ಒಂದಿನಿತೂ ಸಿಡಿಮಿಡಿಗೊಳ್ಳದೆ ತನ್ನ ಕಾಯಕದಲ್ಲಿನ ಈತನ ಶೃದ್ಧೆ ಶ್ಲಾಘನೀಯ.
ನೇಮಿನಾಥ ಬಸದಿ.
ಈ ಬಸದಿಗೆ ಹೆರೆ ಬಸದಿಯೆಂಬ ಹೆಸರೂ ಇದ್ದು ಹೆರೆ ಎಂದರೆ ಹಿರಿಯ ಅಥವಾ ದೊಡ್ಡ ಎಂದರ್ಥ.ಎತ್ತರವಾದ ಗೋಪುರವನ್ನೊಳಗೊಂಡಂತೆ ವಿಶಾಲವಾಗಿ ಇರ್ಮಿಸಲಾಇದ್ದು,ಇಲ್ಲಿ ಇಪ್ಪತ್ನಾಲ್ಕು ತೀರ್ಥಂಕರರ ವಿಗ್ರಹಗಳಿವೆ.ಇಲ್ಲಿನ ಪ್ರಮುಖ ಆಕರ್ಷಣೆ ಐದು ಅಡಿ ಎತ್ತರದ ಕಪ್ಪುಶಿಲೆಯಲ್ಲಿ ನಿರ್ಮಿಸಲಾಗಿರೋ ನೇಮಿನಾಥನ ವಿಗ್ರಹ.ಈತನೇ ಇಲ್ಲಿನ ಗ್ರಾಮದೇವತೆಯೂ ಆಗಿದ್ದು ಈತನಿಗೇ ಅಗ್ರಪೂಜೆ.ಈತನ ಜೊತೆಯಲ್ಲಿ ಕುಷ್ಮಾಂದಿನಿ,ಅಂಬಿಕಾದೇವಿ ಹಾಗೂ ಪದ್ಮಾವತಿಯರ ವಿಗ್ರಹಗಳಿದ್ದು ದೇವಸ್ಥಾನದ ಹೊರಬದಿಯಲ್ಲಿ 45 ಅಡಿ ಎತ್ತರದ ಮಾನಸ್ಥಂಬವಿದೆ.ಇಲ್ಲಿನ ನೇಮಿನಾಥನ ವಿಗ್ರಹ ಒಂದು ಭಾಗಕ್ಕೆ ಸ್ವಲ್ಪ ವಾಲಿಕೊಂಡಂತಿರೋದ್ರಿಂದ ವಾರಂಗ(ವಾರೆ-ಅಂಗ) ಎಂಬ ಹೆಸರು ಬರಲು ಕಾರಣವಾಯ್ತು ಎನ್ನುತ್ತಾರೆ.
ಚಂದ್ರನಾಥ ಬಸದಿ.
ಚಂದ್ರನಾಥ ಬಸದಿಯನ್ನು ಸ್ಥಳೀಯವಾಗಿ ಮಠದ ಬಸದಿಯೆಂದೇ ಕರೆಯುವ ರೂಢಿಯಿದ್ದು ಇಲ್ಲಿಂದಲೇ ಮಠದ ಕಾರ್ಯಸೂಚಿಗಳು ಜರುಗುತ್ತವೆ.ಎಂಟನೇ ತೀರ್ಥಂಕರ ಚಂದ್ರಪ್ರಭ ಇಲ್ಲಿನ ಮುಖ್ಯ ದೇವತೆಯಾಗಿದ್ದು,ಚಂದ್ರಶಿಲೆಯಿಂದ ನಿರ್ಮಿಸಲಾಗಿರೋ ಈತನ ವಿಗ್ರಹ ಪ್ರಮುಖ ಆಕರ್ಷಣೆ.ಯಾಕೆಂದರೆ ವಿಗ್ರಹದ ಪ್ರಭೆ ಕಣ್ಣು ಕೋರೈಸುವಂತಿದ್ದು,ಸದಾ ಸುತ್ತಲೂ ಆವರಿಸಿರೋದನ್ನು ಕಾಣಬಹುದು.
ವರಂಗ ಬಸದಿಗಳ ವಿಶೇಷವೆಂದರೆ ಇಲ್ಲಿನ ಯತಿಗಳೇ ಸದಾ ಶ್ರವಣಬೆಳಗೊಳದ ಮಠಾದೀಶರಾಗುತ್ತಾರೆ.ಇಲ್ಲಿನ ಆಡಳಿತವನ್ನು ಹೊಂಬುಜದ ಮಠಾದೀಶರು ನೋಡಿಕೊಳ್ಳುತ್ತಾರೆ.
ಮತ್ತೊಂದು ವೈಶಿಷ್ಟ್ಯವೆಂದರೆ ಜೈನ ವಾಸ್ತುಶಿಲ್ಪದ ನಾಲ್ಕು ಪ್ರಕಾರಗಳಾದ ಬಸದಿ,ಮಾನಸ್ಥಂಬ,ಏಕಶಿಲಾ ವಿಗ್ರಹ ಹಾಗೂ ಸಮಾಧಿ ಇವೆಲ್ಲವುಗಳನ್ನೂ ಇಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.
ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು.
ಬೇಡರಾಜನ ಬೆಟ್ಟ.
ಕೆರೆಬಸದಿಯ ಪಕ್ಕದಲ್ಲಿಯೇ ದೊಡ್ಡದೊಂದು ಬೆಟ್ಟವಿದ್ದು ಅದನ್ನೇರಿ ಬೇಡರಾಜನೆಂಬ ಜೈನ ದೊರೆಯ ಅರಮನೆಯ ಕುರುಹುಗಳನ್ನು ವೀಕ್ಷಿಸಬಹುದಾಗಿದೆ.
ಮೂಡಬಿದ್ರೆಯ ಸಾವಿರ ಕಂಬದ ಬಸದಿ.
14ನೇ ಶತಮಾಮದಲ್ಲಿ ದೇವರಾಯ ಒಡೆಯರ್ ನಿರ್ಮಿಸಿದ ಈ ಬಸದಿಯಲ್ಲಿ ಸಾವಿರ ಕಂಬಗಳನ್ನು ನಿರ್ಮಿಸಲಾಗಿದ್ದು ಪ್ರತಿಯೊಂದೂ ಪ್ರತ್ಯೇಕ ರಚನೆಯನ್ನೊಳಗೊಂಡಿರೋದು ವಿಶೇಷ.ಜೈನ ತೀರ್ಥಂಕರನ ಎಂಟು ಅಡಿಯ ಬೃಹತ್ ವಿಗ್ರಹವಿದ್ದು,ಬಸದಿಯ ಮುಂಬಾಗದಲ್ಲಿ 60ಅಡಿಗಳ ಎತ್ತರದ ಮಾನಸ್ಥಂಬವಿದೆ.
ಇದಲ್ಲದೆ ಗುರುಬಸದಿ,ವಿಕ್ರಮಬಸದಿ,ಮಹಾದೇವಬಸದಿ,ಚೋಳ ಬಸದಿ,ಕೋಟಿ ಬಸದಿ,ಧರ್ಮಾಶೆಟ್ಟಿ ಬಸದಿ ಯಲ್ಲದೆ ಅಮ್ಮನವರ ಬಸದಿಯನ್ನೂ ವೀಕ್ಷಿಸಬಹುದು.
ಹೆಬ್ರಿಯ ಸೀತಾನದಿ ನಿಸರ್ಗಧಾಮ.
ಇಲ್ಲಿ ಉಳಿದುಕೊಳ್ಳಲು ಜಂಗಲ್ ರೆಸಾರ್ಟುಗಳು ಹಾಗೂ ಟೆಂಟ್ ಹೌಸುಗಳು ಲಭ್ಯವಿದ್ದು ಮಳೆಗಾಲದಲ್ಲಿ ರಿವರ್ ರಾಫ್ಟಿಂಗ್ ಸೇರಿದಂತೆ ಇನ್ನಿತರ ಅಡ್ವೆಂಚರ್ ಗಳ ಅನುಭವ ಪಡೆಯಬಹುದು.ಇಷ್ಟೇ ಅಲ್ಲದೆ ಚಾರಣ,ಕಾಡಿನ ನಡಿಗೆ ಹಾಗೂ ಫಿಶಿಂಗ್ ಕ್ಯಾಂಪುಗಳನ್ನೂ ಆಯೋಜಿಸಲಾಗುತ್ತಿರುತ್ತದೆ.
ಕೂಡ್ಲು ತೀರ್ಥ ವಾಟರ್ ಫಾಲ್ಸ್.
ಹೆಬ್ರಿಯಿಂದ ಆಗುಂಬೆ ಮಾರ್ಗದಲ್ಲಿ ನಾಲ್ಕು ಕಿಮೀ ಸಾಗಿದಲ್ಲಿ ಸಿಗುವ ಈ ಜಲಪಾತಕ್ಕೆ ಸೀತಾಫಾಲ್ಸ್ ಎಂಬ ಹೆಸರೂ ಇದೆ.
ಜಲಪಾತದ ಸಮೀಪದ ವರೆಗೂ ರಸ್ತೆ ಲಭ್ಯವಿದ್ದು ನಂತರದಲ್ಲಿ ಒಂದು ಕಿಮೀ ನಡೆಯಬೇಕಾಗುತ್ತದೆ.ಇಲ್ಲಿಯೂ ಸಮೀಪದಲ್ಲಿ ಜಂಗಲ್ ಕ್ಯಾಂಪುಗಳಿದ್ದು ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ.
ತಲುಪುವ ಬಗೆ...
ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ 24ಕಿಮೀ,
ಹೆಬ್ರಿಯಿಂದ ಅಂತರ 6ಕಿಮೀ.
ಉಡುಪಿಯಿಂದ ಅಂತರ 42 ಕಿಮೀ
ಮಂಗಳೂರಿನಿಂದ ಅಂತರ 85ಕಿಮೀ.
ಬೆಂಗಳೂರಿನಿಂದ ಅಂತರ 388ಕಿಮೀ.
ಸಮೀಪದ ವಿಮಾನ ನಿಲ್ದಾಣ ಮಂಗಳೂರು.
ಸಮೀಪದ ರೈಲ್ವೇ ನಿಲ್ದಾಣ ಉಡುಪಿ.
ಸಮೀಪದ ಬಸ್ ನಿಲ್ದಾಣ ಹೆಬ್ರೀ.

No comments:
Post a Comment